Google Duo ಈಗ Google Meet ಅಗಿದೆ.
ಇನ್ನಷ್ಟು ತಿಳಿಯಿರಿ

ಎಲ್ಲರಿಗಾಗಿ ವೀಡಿಯೊ ಕರೆಗಳು ಮತ್ತು ಮೀಟಿಂಗ್‌ಗಳು.

Google Meet ಎಂಬುದು ಯಾವುದೇ ಸಾಧನದಲ್ಲಿ ಸುರಕ್ಷಿತ, ಉನ್ನತ ಗುಣಮಟ್ಟದ ವೀಡಿಯೊ ಮೀಟಿಂಗ್‌ಗಳು ಮತ್ತು ಎಲ್ಲರಿಗಾಗಿ ಲಭ್ಯವಿರುವ ಕರೆಗಳಿಗೆ ಒಂದು ಸೇವೆಯಾಗಿದೆ.

ಪ್ರಧಾನ ಚಿತ್ರ

ಸುರಕ್ಷಿತವಾಗಿ Meet ಮಾಡಿ

ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಮತ್ತು ನಿಮ್ಮ ಗೌಪ್ಯತೆಯನ್ನು ಕಾಪಾಡಲು Google ಬಳಸುವ ರಕ್ಷಣಾ ಕ್ರಮಗಳನ್ನೇ Meet ಸಹ ಬಳಸುತ್ತದೆ. Meet ವೀಡಿಯೊ ಕಾನ್ಫರೆನ್ಸ್‌ಗಳನ್ನು ರವಾನೆಯ ಸಮಯದಲ್ಲಿ ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಮತ್ತು ಹೆಚ್ಚುವರಿ ಸುರಕ್ಷತೆಗಾಗಿ ನಮ್ಮ ವ್ಯಾಪಕ ಸುರಕ್ಷತಾ ಕ್ರಮಗಳನ್ನು ನಿರಂತರವಾಗಿ ಅಪ್‌ಡೇಟ್ ಮಾಡಲಾಗುತ್ತದೆ.

ಸುರಕ್ಷಿತವಾಗಿ Meet ಬಳಸಿ

ಎಲ್ಲಿಂದ ಬೇಕಾದರೂ Meet ಮಾಡಿ

Google Meet ನಲ್ಲಿ ಇಡೀ ತಂಡವನ್ನು ಒಟ್ಟುಗೂಡಿಸಿ. ಇಲ್ಲಿ ನೀವು ವ್ಯಾಪಾರ ಪ್ರಸ್ತಾವಗಳನ್ನು ಪ್ರಸ್ತುತಪಡಿಸಬಹುದು, ಕೆಮಿಸ್ಟ್ರಿ ಅಸೈನ್‌ಮೆಂಟ್‌ಗಳನ್ನು ಜೊತೆಗೂಡಿ ಪೂರ್ಣಗೊಳಿಸಬಹುದು ಅಥವಾ ಮುಖಾಮುಖಿ ಭೇಟಿಯಾಗಬಹುದು.

ವ್ಯಾಪಾರಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳು ತಮ್ಮ ಡೊಮೇನ್‌ನೊಳಗೆ 100,000 ವೀಕ್ಷಕರಿಗೆ ಮೀಟಿಂಗ್‌ಗಳನ್ನು ಲೈವ್ ಸ್ಟ್ರೀಮ್ ಮಾಡಬಹುದು.

Google Meet ಎಂದರೇನು

ಯಾವುದೇ ಸಾಧನದಲ್ಲಿ, ಎಲ್ಲಿಯಾದರೂ ಭೇಟಿ ಮಾಡಿ

ಯಾವುದೇ ಆಧುನಿಕ ವೆಬ್ ಬ್ರೌಸರ್ ಅನ್ನು ಬಳಸಿಕೊಂಡು ಅತಿಥಿಗಳು ತಮ್ಮ ಕಂಪ್ಯೂಟರ್‌ನಿಂದ ಸೇರಿಕೊಳ್ಳಬಹುದು—ಇನ್‌ಸ್ಟಾಲ್ ಮಾಡಲು ಯಾವುದೇ ಸಾಫ್ಟ್‌ವೇರ್ ಇಲ್ಲ. ಮೊಬೈಲ್ ಸಾಧನಗಳಲ್ಲಿ, ಅವರು Google Meet ಆ್ಯಪ್‌ನಿಂದ ಸೇರಿಕೊಳ್ಳಬಹುದು. Google Nest Hub Max ನಿಂದ ಅತಿಥಿಗಳು ಮೀಟಿಂಗ್‌ಗಳು ಮತ್ತು ಕರೆಗಳನ್ನು ಸಹ ಸೇರಿಕೊಳ್ಳಬಹುದು.

ಯಾವುದೇ ಸಾಧನದಲ್ಲಿ Meet ಮಾಡಬಹುದು

ಸ್ಪಷ್ಟವಾಗಿ Meet ಮಾಡಿ

Google Meet ನಿಮ್ಮ ನೆಟ್‌ವರ್ಕ್ ವೇಗಕ್ಕೆ ತಕ್ಕ ಹಾಗೆ ಹೊಂದಾಣಿಕೆಯಾಗುತ್ತದೆ ಮತ್ತು ನೀವು ಎಲ್ಲಿದ್ದರೂ ಅಧಿಕ ಗುಣಮಟ್ಟದ ವೀಡಿಯೊ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗದ್ದಲವಿದ್ದರೂ, ಹೊಸ AI ವರ್ಧನೆಗಳು ಕರೆಗಳನ್ನು ಸ್ಪಷ್ಟವಾಗಿರಿಸುತ್ತವೆ.

ಸ್ಪಷ್ಟವಾಗಿ Meet ಮಾಡಿ

ಎಲ್ಲರನ್ನೂ Meet ಮಾಡಿ

Google ನ ಧ್ವನಿ ಗುರುತಿಸುವಿಕೆ ತಂತ್ರಜ್ಞಾನವು ಒದಗಿಸಿದ ಲೈವ್ ಕ್ಯಾಪ್ಶನ್‌ಗಳ ಮೂಲಕ Google Meet ನಲ್ಲಿ ಮೀಟಿಂಗ್‌ಗಳನ್ನು ಇನ್ನೂ ಸುಲಭವಾಗಿ ಪ್ರವೇಶಿಸಬಹುದು. ಬೇರೆ ಭಾಷೆಯ ಭಾಷಣಕಾರರು, ಶ್ರವಣ ದೋಷ ಇರುವ ಪಾಲ್ಗೊಳ್ಳುವವರು, ಅಥವಾ ಬಹಳ ಗದ್ದಲವಿರುವ ಕಾಫಿ ಶಾಪ್‌ಗಳಲ್ಲಿ, ಎಲ್ಲರೂ ಈಗ ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆ (ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ).

ಎಲ್ಲರನ್ನೂ Meet ಮಾಡಿ
ಸಂಪರ್ಕದಲ್ಲಿರಿ

ಸಂಪರ್ಕದಲ್ಲಿರಿ

ಸರಾಗವಾಗಿ ನಿಗದಿಪಡಿಸಬಹುದು, ಸುಲಭವಾಗಿ ರೆಕಾರ್ಡ್ ಮಾಡಲು ಸಾಧ್ಯವಿದೆ ಮತ್ತು ಜನರು ತೊಡಗಿಸಿಕೊಳ್ಳಲು ಮತ್ತು ಸಂಪರ್ಕದಲ್ಲಿರಲು ಅಡಾಪ್ಟಿವ್ ಲೇಔಟ್‌ಗಳು ಸಹಾಯ ಮಾಡುತ್ತವೆ.

ಪಾಲ್ಗೊಳ್ಳುವವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳುವಿಕೆ

ನಿಮ್ಮ ಪರದೆಯನ್ನು ಹಂಚಿಕೊಳ್ಳಿ

ನಿಮ್ಮ ಸಂಪೂರ್ಣ ಪರದೆ ಅಥವಾ ಕೇವಲ ವಿಂಡೋವನ್ನು ತೋರಿಸುವ ಮೂಲಕ ಡಾಕ್ಯುಮೆಂಟ್‌ಗಳು, ಸ್ಲೈಡ್‌ಗಳು ಮತ್ತು ಸ್ಪ್ರೆಡ್‌ಶೀಟ್‌ಗಳನ್ನು ಪ್ರಸ್ತುತಪಡಿಸಿ.

ಮೀಟಿಂಗ್‌ಗಳನ್ನು ಹೋಸ್ಟ್ ಮಾಡಿ

ದೊಡ್ಡ ಮೀಟಿಂಗ್‌ಗಳನ್ನು ಹೋಸ್ಟ್ ಮಾಡಿ

ಮೀಟಿಂಗ್‌ನಲ್ಲಿ ಭಾಗವಹಿಸಲು 500 ರಷ್ಟು ಆಂತರಿಕ ಅಥವಾ ಹೊರಗಿನ ಪಾಲ್ಗೊಳ್ಳುವವರನ್ನು ಆಹ್ವಾನಿಸಿ.

ನಿಮ್ಮ ಫೋನ್‌ನ ಮೂಲಕ ಸೇರಿಕೊಳ್ಳಿ

ನಿಮ್ಮ ಫೋನ್‌ನ ಮೂಲಕ ಸೇರಿಕೊಳ್ಳಿ

ವೀಡಿಯೊ ಕರೆಯಲ್ಲಿ ಸೇರಿಕೊಳ್ಳಲು Google Meet ಆ್ಯಪ್ ಅನ್ನು ಬಳಸಿ, ಅಥವಾ ಮೀಟಿಂಗ್‌ನ ಆಹ್ವಾನದಲ್ಲಿರುವ ಡಯಲ್ ಇನ್ ಸಂಖ್ಯೆಯ ಮೂಲಕ ಆಡಿಯೋ-ಮಾತ್ರ ಕರೆಗೆ ಸೇರಿಕೊಳ್ಳಿ.

ನಿಯಂತ್ರಣ ಪಡೆಯಿರಿ

ನಿಯಂತ್ರಣ ಪಡೆಯಿರಿ

ಮೀಟಿಂಗ್‌ಗಳು ಡೀಫಾಲ್ಟ್ ಆಗಿ ಸುರಕ್ಷಿತವಾಗಿರುತ್ತವೆ. ಮೀಟಿಂಗ್‌ಗೆ ಯಾರು ಸೇರಿಕೊಳ್ಳಬಹುದು ಎಂಬುದನ್ನು ಮಾಲೀಕರು ನಿಯಂತ್ರಿಸಬಹುದು; ಮೀಟಿಂಗ್‌ನ ಮಾಲೀಕರು ಅನುಮೋದಿಸಿದ ಜನರು ಮಾತ್ರ ಪ್ರವೇಶಿಸಬಹುದು.

ಈವೆಂಟ್‌ಗಳನ್ನು ಪ್ರಸಾರ ಮಾಡಿ

ಆಂತರಿಕ ಈವೆಂಟ್‌ಗಳನ್ನು ಪ್ರಸಾರ ಮಾಡಿ

ನಿಮ್ಮ ಡೊಮೇನ್‌ನಲ್ಲಿರುವ 100,000 ದವರೆಗಿನ ವೀಕ್ಷಕರಿಗೆ ಟೌನ್ ಹಾಲ್‌ಗಳು ಮತ್ತು ಸೇಲ್ಸ್ ಮೀಟಿಂಗ್‌ಗಳಂತಹ ಈವೆಂಟ್‌ಗಳನ್ನು ಲೈವ್ ಸ್ಟ್ರೀಮ್ ಮಾಡಿ.

ಮುಂಚೂಣಿಯಲ್ಲಿರುವ ಕಂಪನಿಗಳು Google Meet ಮೇಲೆ ವಿಶ್ವಾಸ ಹೊಂದಿವೆ

Colagte-Palmolive
GANT
BBVA ಲೋಗೋ
Salesforce ಲೋಗೋ
AIRBUS ಲೋಗೋ
Twitter ಲೋಗೋ
Whirlpool
PWC ಲೋಗೋ

ಟಾಪ್ ಪ್ರಶ್ನೆಗಳು

Google Hangouts, Hangouts Meet, ಹಾಗೂ Google Meet ನಡುವೆ ಏನು ವ್ಯತ್ಯಾಸವಿದೆ?

Hangouts Meet ಹಾಗೂ Hangouts Chat ಅನ್ನು ಏಪ್ರಿಲ್ 2020 ರಲ್ಲಿ Google Meet ಹಾಗೂ Google Chat ಎಂಬುದಾಗಿ ರೀಬ್ರ್ಯಾಂಡ್ ಮಾಡಲಾಯಿತು. ನಾವು 2019 ರಲ್ಲಿ ಘೋಷಿಸಿದ ಪ್ರಕಾರ ಎಲ್ಲಾ ಕ್ಲಾಸಿಕ್ Hangouts ಬಳಕೆದಾರರ ಡೇಟಾವನ್ನು ಹೊಸ Meet ಮತ್ತು Chat ಉತ್ಪನ್ನಗಳಿಗೆ ರವಾನೆ ಮಾಡುತ್ತಿದ್ದೇವೆ. ಎಂಟರ್‌ಪ್ರೈಸ್-ದರ್ಜೆಯ ಆನ್‌ಲೈನ್ ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಎಲ್ಲರಿಗೂ ಒದಗಿಸುವುದಕ್ಕಾಗಿ, ನಾವು ಮೇ 2020 ರಲ್ಲಿ Google Meet ನ ಉಚಿತ ಆವೃತ್ತಿಯ ಕುರಿತು ಘೋಷಿಸಿದ್ದೇವೆ.

Google Meet ಸುರಕ್ಷಿತವಾಗಿದೆಯೇ?

ಹೌದು. ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು ಮತ್ತು ನಿಮ್ಮ ಗೌಪ್ಯತೆಯನ್ನು ಕಾಪಾಡಲು, Google ಕ್ಲೌಡ್‌ನ ಸುರಕ್ಷತೆ-ಮೂಲವಾಗಿರುವ-ವಿನ್ಯಾಸದ ಸಂರಚನೆಯ ಪ್ರಯೋಜನವನ್ನು Meet ಪಡೆದುಕೊಳ್ಳುತ್ತದೆ. ಗೌಪ್ಯತೆಯ ಕುರಿತಾದ ನಮ್ಮ ಬದ್ಧತೆಗಳು, ದುರ್ಬಳಕೆ-ವಿರೋಧಿ ಕ್ರಮಗಳು ಮತ್ತು ಡೇಟಾ ಸುರಕ್ಷತೆಯ ಕುರಿತು ನೀವು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.

ಹೊರಗಿನಿಂದ ಪಾಲ್ಗೊಳ್ಳುವವರು ಕರೆಯಲ್ಲಿ ಸೇರಿಕೊಳ್ಳಬಹುದೇ?

ಖಂಡಿತ. Google Meet ನ ಉಚಿತ ಆವೃತ್ತಿಯಲ್ಲಿ ಸೇರಿಕೊಳ್ಳುವುದಕ್ಕಾಗಿ, ಪಾಲ್ಗೊಳ್ಳುವವರೆಲ್ಲರೂ Google ಖಾತೆಗೆ ಸೈನ್ ಇನ್ ಮಾಡಿರಬೇಕು. ಕೆಲಸ ಅಥವಾ ವೈಯಕ್ತಿಕ ಇಮೇಲ್ ವಿಳಾಸದ ಮೂಲಕ ನೀವು Google ಖಾತೆಯನ್ನು ರಚಿಸಬಹುದು.

Google Workspace ಗ್ರಾಹಕರಿಗಾಗಿ, ನೀವು ಮೀಟಿಂಗ್ ಅನ್ನು ರಚಿಸಿದ ಬಳಿಕ, Google ಖಾತೆಯನ್ನು ಹೊಂದಿರದವರನ್ನು ಸಹ ಸೇರಿಕೊಳ್ಳುವುದಕ್ಕಾಗಿ ಆಹ್ವಾನಿಸಬಹುದು. ಮೀಟಿಂಗ್‌ನಲ್ಲಿ ಪಾಲ್ಗೊಳ್ಳುವವರೆಲ್ಲರೊಂದಿಗೆ ಲಿಂಕ್ ಅಥವಾ ಮೀಟಿಂಗ್ ಐಡಿಯನ್ನು ಹಂಚಿಕೊಳ್ಳಿ.

Google Meet ನ ವೆಚ್ಚ ಎಷ್ಟು?

Google ಖಾತೆಯನ್ನು ಹೊಂದಿರುವ ಎಲ್ಲರೂ ವೀಡಿಯೊ ಮೀಟಿಂಗ್ ರಚಿಸಬಹುದು, ಗರಿಷ್ಠ 100 ಜನ ಪಾಲ್ಗೊಳ್ಳುವವರನ್ನು ಆಹ್ವಾನಿಸಬಹುದು ಮತ್ತು ಪ್ರತಿಯೊಂದು ಮೀಟಿಂಗ್‌ನಲ್ಲಿ 60 ನಿಮಿಷಗಳ ಕಾಲ ಉಚಿತವಾಗಿ ಮೀಟಿಂಗ್ ನಡೆಸಬಹುದು.

ಅಂತಾರಾಷ್ಟ್ರೀಯ ಡಯಲ್ ಇನ್ ಸಂಖ್ಯೆಗಳು, ಮೀಟಿಂಗ್ ರೆಕಾರ್ಡಿಂಗ್, ಲೈವ್ ಸ್ಟ್ರೀಮಿಂಗ್ ಮತ್ತು ನಿರ್ವಾಹಕ ನಿಯಂತ್ರಣಗಳಂತಹ ಹೆಚ್ಚುವರಿ ಫೀಚರ್‌ಗಳಿಗಾಗಿ, ಪ್ಲಾನ್‌ಗಳು ಮತ್ತು ದರ ಎಂಬುದನ್ನು ನೋಡಿ.

Google Meet ಲಿಂಕ್‌ಗಳ ಅವಧಿ ಮುಕ್ತಾಯವಾಗುತ್ತದೆಯೇ?

ಪ್ರತಿ ಮೀಟಿಂಗ್‌ಗೆ ಒಂದು ಅನನ್ಯ ಕೋಡ್ ನೀಡಲಾಗುತ್ತಿದ್ದು, ಆ ಕೋಡ್ ಯಾವ ಕಾರ್ಯಸ್ಥಳದ ಉತ್ಪನ್ನದಿಂದ ಮೀಟಿಂಗ್ ಅನ್ನು ರಚಿಸಲಾಗಿದೆ ಎಂಬುದರ ಆಧಾರದ ಮೇಲೆ ಮುಕ್ತಾಯದ ಅವಧಿಯನ್ನು ಹೊಂದಿರುತ್ತದೆ. ಇನ್ನಷ್ಟು ತಿಳಿಯಿರಿ here.

Google Meet ನನ್ನ ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿದೆಯೇ?

Google Meet ಸೇರಿದ ಹಾಗೆ ನಮ್ಮ ಉತ್ಪನ್ನಗಳ ಸುರಕ್ಷತೆ, ಗೌಪ್ಯತೆ ಮತ್ತು ಅನುವರ್ತನೆ ನಿಯಂತ್ರಣಗಳು, ಪ್ರಮಾಣೀಕರಣ ಸಾಧಿಸುವಿಕೆ, ಅನುವರ್ತನೆಗಳ ದೃಢೀಕರಣ ಅಥವಾ ವಿಶ್ವಾದ್ಯಂತದ ಮಾನದಂಡಗಳ ಅನುಸಾರ ಆಡಿಟ್ ವರದಿಗಳ ಕುರಿತು ನಿಯಮಿತವಾಗಿ ಸ್ವತಂತ್ರ ದೃಢೀಕರಣವನ್ನು ನಡೆಸಲಾಗುತ್ತದೆ. ಪ್ರಮಾಣೀಕರಣಗಳು ಹಾಗೂ ದೃಢೀಕರಣಗಳ ನಮ್ಮ ಜಾಗತಿಕ ಪಟ್ಟಿಯು ಇಲ್ಲಿ ಲಭ್ಯವಿದೆ.

ನನ್ನ ಸಂಸ್ಥೆಯು Google Workspace ಅನ್ನು ಬಳಸುತ್ತಿದೆ. ನನಗೆ Calendar ನಲ್ಲಿ Google Meet ಏಕೆ ಕಾಣಿಸುತ್ತಿಲ್ಲ?

Google Meet ಉತ್ಪನ್ನವು Google Calendar ನಲ್ಲಿ ಡೀಫಾಲ್ಟ್ ವೀಡಿಯೊ ಕಾನ್ಫರೆನ್ಸಿಂಗ್ ಪರಿಹಾರವಾಗಿದೆಯೇ ಎಂಬಂತಹ Google Workspace ಸೆಟ್ಟಿಂಗ್‌ಗಳನ್ನು ಐಟಿ ನಿರ್ವಾಹಕರು ನಿಯಂತ್ರಿಸುತ್ತಾರೆ. ನಿಮ್ಮ ಸಂಸ್ಥೆಯಲ್ಲಿ Google Meet ಅನ್ನು ಹೇಗೆ ಸಕ್ರಿಯಗೊಳಿಸಬೇಕು ಎಂಬುದನ್ನು ತಿಳಿಯಲು Google Workspace ನಿರ್ವಾಹಕ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.